Submission 765

ಹೇಳು ಮನವೇ...

ರಚನೆ : ಕೌಶಿಕ್ ಟಿ ಎಸ್

----------------------------------

ಹೇಳುವಷ್ಟು ಹೇಳಿಯಾಗಿದೆ ಕೇಳುವಷ್ಟು ಕೇಳಾಗಿದೆ ಏನಾಗಿದೆ ಹೇಳು ಮನವೇ ಭಾರವಾದ ಹೃದಯ ಹಗುರಾಗದ ಮನಸ್ಸು ಏನಾಗಿದೆ ಹೇಳು ಮನವೇ ತಡೆಯಲಾರದ ದುಃಖ ಮರೆಯಲಾಗದ ನೆನಪು ಏನಾಗಿದೆ ಹೇಳು ಮನವೇ ಬಯಕೆಗಳು ನೂರು ಮುಗಿಯದ ಕಣ್ಣೀರು ಏನಾಗಿದೆ ಹೇಳು ಮನವೇ ನಾ ಕಂಡ ಕನಸು ದೂರವಾದ ಮನಸ್ಸು ಯಾಕೆ ಈ ಮೌನ ಹೇಳು ಮನವೇ

----------------------------------

ನೋಂದಣಿ ಐಡಿ : KPF-S1-5345

0
Votes
181
Views
1 Year
Since posted

Finished since 398 days, 4 hours and 33 minutes.

Scroll to Top