ಎತ್ತ ಓಡುತ್ತಿದೆ ಭೂಮಂಡಲ ನರನ ಪಯಣ
ರಚನೆ : ವಿನೋದ ರಾ ದೇಗಿನಾಳ
----------------------------------
ಎತ್ತ ಓಡುತ್ತಿದೆ ಭೂಮಂಡಲ ನರನ ಪಯಣ ಜ್ಞಾನದ ಕಡೆಯೋ ಅಜ್ಞಾನದ ಕಡೆಯೋ? ಇದು ಬುದ್ಧಿಯ ಮೀತಿಯೋ ಮೂರ್ಖತೆಯ ಮೀತಿಯೊ? ನಾ ನರಿಯೇ ಬೆಳೆಯುತ್ತಿರುವ ವಿಜ್ಞಾನವೇ ಮೀರಿದ ಅಜ್ಞಾನವೇ? ಸಸ್ಯಮರ ಬೆಳೆಸುವ ತಂತ್ರಜ್ಞಾನವೇ ಅದನ್ನು ಕಡೆಯುವ ಯಂತ್ರಜ್ಞಾನವೇ? ನಾ ನರಿಯೇ ಹೈಬ್ರೀಡ್ ತಳಿಯಂತೆ ಶಕ್ತಿಯ ಕೊರತೆಯಂತೆ ಲಘು ಸಮಯದಲ್ಲಾಗುವ ಆಹಾರವಂತೆ ರೋಗಗಳಿಗೆ ಆಹ್ವಾನವಂತೆ ನಾ ನರಿಯೇ ಎಲೆಕ್ಟ್ರಾನಿಕ್ ಮಾಧ್ಯಮಗಳ ಸಹಾಯವೋ ಪ್ರಾಣಿ ಪಕ್ಷಿಗಳ ಮರಣ ಓಮವೋ? ಕೃಷಿಯ ಪ್ರಗತಿಯೋ ಅನುವಂಶೀಯ ನಾಶವೋ? ನಾ ನರಿಯೇ ಕೃತಕ ಸೂರ್ಯ, ಮೋಡ, ಮಳೆಯಂತೆ ಇದು ಬುದ್ಧಿವಂತಿಕೆಯೋ ಮೊಂಡುತನವೋ? ಸೌರಮಂಡಲ ತೀಳಿಯುವ ಪ್ರಯನ್ನವೋ ಇಲ್ಲಾ ಕಲುಷಿತ ಮಾಡುವ ಸಂಕಲ್ಪವೋ? ನಾ ನರಿಯೇ ದೇಶ ರಕ್ಷಿಸುವ ಮೀಸೈಲ್ ಬಾಂಬ್ಗಳೋ ಜೀವಕುಲವ ನಶಿಸುವ ಯೋಜನೆಯೋ? ಇದು ಶಕ್ತಿಯ ಮೀತಿಯೋ ವಿನಾಶಕಾರಿಯ ಕಾಲಘಟ್ಟವೋ? ನಾ ನರಿಯೇ ಎತ್ತ ಓಡುತ್ತಿದೆ ಭೂಮಂಡಲ ನರನ ಪಯಣ ಜ್ಞಾನದ ಕಡೆಯೋ ಅಜ್ಞಾನದ ಕಡೆಯೋ ನಾ ನರಿಯೇ
----------------------------------
ನೋಂದಣಿ ಐಡಿ : KPF-S1-5412