Submission 790

ಕೂಸಿನಾಸೆ

ರಚನೆ : ಸಾಯಿ ರಮಾ ಎ ವಿ

----------------------------------

ಏಸುದಿನಗಳಿಂದ ಕಾದಿರುವೆ ನಿನಗಾಗಿ ಕೂಸಮ್ಮ ಬರುವೆ ಹೊರಗೆಂದು| ಕಾದಿರುವೆ ಜೋಗುಳವ ಹಾಡೇನು ಹಾಲುಣಿಸಿ! ನಿನಗೆ ದಿನಬೆಳಗಾದರೆ ದಿನಕರಗೆ ತೋರುವೆ ನಿನ್ನಂದ ಮೊಗವ ನಗುತಿರಲು| ನಾ ತೋರಿ ದೃಷ್ಟಿ ಬೊಟ್ಟೊಂದ ಗಲ್ಲಕ್ಕಿಡುವೆ ಆಸೆಯಾಯಿತು ಎನಗೆ ಕೂಸೆ ನಿನ್ನಿಂದ ತಾಯಾಗುವೆ ನಾನು ಈ ಜನುಮದಲಿ| ಎಂದು ಮುಕ್ಕೋಟಿ ದೇವರಿಗೂ ನಮಿಸುವೇನು ನೂರೊಂದ ಕಥೆಯ ನಾ ಹೇಳುವೆ ನಿನಗಾಗಿ ಸೂರೆಲ್ಲ ಓಡಾಡು ಆಡುತಲಿ | ಕಂದಮ್ಮ ಊರೆಲ್ಲ ಹೊಗಳಲಿ ನಿನ್ನ ಚೆಲುವ

----------------------------------

ನೋಂದಣಿ ಐಡಿ : KPF-S1-5358

0
Votes
118
Views
1 Year
Since posted

Finished since 311 days, 19 hours and 21 minutes.

Scroll to Top