Submission 677

ಮಸಣ

ರಚನೆ : ಸದ್ದಾಂ ತಗ್ಗಹಳ್ಳಿ

----------------------------------

ಮೇಲು ಕೀಳೆಂಬ ಭೇದ-ಭಾವ ಇಲ್ಲ ನಾನು ತಾನೆಂಬ ಅಹಂಕಾರವಿಲ್ಲ ಹೆಣ್ಣು ಗಂಡೆಂಬ ಹೋಲಿಕೆ ಇಲ್ಲ ನಾ-ತಾ ಮುಂದೆಂಬ ಹೋರಾಟವಿಲ್ಲ ಮಹಾದಾಸೆಗಳೆಲ್ಲಾ ಮಣ್ಣಾಗಿಹುದು ಉಸಿರ ಪಯಣ ಈಗ ನಿಂತಿಹುದು ಕಾಂಚಾಣಕ್ಕಾಗಿ ಕಾದಾಡಿದವರು ಕಾಟವಿಲ್ಲದೆ ಮಲಗಿರುವರು ನನ್ನವರೆಂದೂ ಮೆರೆದವರು ಸಂಬಂಧದಿ ದೂರ ಉಳಿಯುವರು ಕಷ್ಟದಲ್ಲಿ ಬರದವರು ಕಟ್ಟಿಗೆಲಿಟ್ಟಾಗ ಬರುವರು ಹೊತ್ತಿಗೆ ತುತ್ತು ನೀಡದಿದ್ದರು ಬಂದು ಬಿಕ್ಕಿ ಬಿಕ್ಕಿ ಅಳುವರು...!

----------------------------------

ನೋಂದಣಿ ಐಡಿ : KPF-S1-5289

0
Votes
173
Views
1 Year
Since posted

Finished since 350 days, 8 hours and 56 minutes.

Scroll to Top