ನನ್ನವಳು
ರಚನೆ : ಶಿವಾನಂದ. ಸಿದ್ಧಪ್ಪ. ಬೇವೂರ
----------------------------------
ನನ್ನಂತರಂಗದ ಆತ್ಮೀಯ ನೀನು ನಿನ್ನಿಂದ ಚಂದ ಈ ಭೂಮಿ ಬಾನು ನನ್ನಲಿ ನೀನು ನನಗಾಗಿ ನೀನು ನೀನಿರೆ ಬಾಳಲಿ ತುಂಬಿದೆ ಜೇನು ಹೇಳು ನಿನಗಾಗಿ ಮಾಡಲಿ ಏನು ನಾ ವಿಚಾರಿಸಿದಂತೆ ನೀನೊಮ್ಮೆ ವಿಚಾರಿಸು ನನ್ನ ನೂರುಮಾತಿಗೆ ನಿನ್ನದೊಂದು ಸೇರಿಸು ನಾ ಹೇಳಿದ ಕಥೆಗಳಿಗೆ ನಿನ್ದೊಂದು ಕೂಡಿಸು ನನ್ನಂತೆ ಕವನಗಳ ನೀನೊಂದು ರಚಿಸು ಮೌನ ಮುರಿದು ಹೊಸ ಗಾನ ಸುಧೆ ಹರಿಸು ನಿನಗಿಂತ ಯಾವುದಿಲ್ಲ ಮುಖ್ಯ ನಿನಗಿಂತ ಬೇರೆಲ್ಲವೂ ಅಮುಖ್ಯ ನಿನಗಿಂತ ನನಗೆ ಬೇಕಿಲ್ಲ ಜಾಸ್ತಿ ನಿನಗಿಂತ ನನಗೆ ಬೇರಿಲ್ಲ ಆಸ್ತಿ ನಿನಗಿಂತ ಉಳಿದೆಲ್ಲವೂ ನಾಸ್ತಿ
----------------------------------
ನೋಂದಣಿ ಐಡಿ : KPF-S1-5081