Submission 513

ಕಪಟತನ

ರಚನೆ : ಬಿ ಚಂದ್ರಗೌಡ

----------------------------------

ಇವರ ಮಡಿ ಉಡಿ ನೋಡಿದರೆ ಇವರೇ ದೇವರ ಸ್ವರೂಪ ಎಂದುಕೊಂಡೆ ಇವರಿಗೂ ಬಿಪಿ ಶುಗರ್ ಬಂದಿದೆ ಎಂದ ಮೇಲೆ, ಅವರು ನರರು ಎಂದುಕೊಂಡ || ಮನಸ್ಸಿನಲ್ಲಿ ಮೂಟೆಯಷ್ಟು ಕಾಮ ಇಟ್ಟುಕೊಂಡು ನೋಡುವರ ಕಣ್ಣಿಗೆ ಸನ್ಯಾಸಿ ಎನಿಸಿಕೊಂಡು ಕೊರಳಲ್ಲಿ ಮಾಲೆಯ ಧರಿಸಿಕೊಂಡು ಗಂಗೆಯಲ್ಲಿ ಮಿಂದೆದ್ದರೆ ಪವಿತ್ರರಾದರೇನು ? ಭಕ್ತಿಯೆಂಬುದು ಭಕ್ತನ ಶುದ್ಧ ಮನಸ್ಸಿನಲ್ಲಿರುವುದೆಂದು ತಿಳಿಸದೆ, ದೋಷಗಳ ಭಯವನ್ನು ಹುಟ್ಟಿಸಿದಿರಿ ಪರಿಹಾರಕ್ಕೆ ಹೋಮ ಹವನ ಕಥೆ ಕಟ್ಟಿದಿರಿ ಯಾರು ಅರಿಯದ ಮಂತ್ರವ ಪಠಿಸಿ ಪರಿಹಾರ ಎಂದಿರಿ|| ಯಾಕೆ? ಈ ಮೌಡ್ಯತನ ಮೊಂಡಾಟ ದೇವರು ಪುರೋಹಿತರ ದೇಹದಲ್ಲಿಲ್ಲ ಅವರು ಪಠಿಸುವ ಮಂತ್ರದಲ್ಲಿಲ್ಲ ನೀವು ಮಾಡುವ ಸತ್ಕಾರ್ಯಗಳಲ್ಲಿಇರುವನೆಂದು ಅರಿತುಕೊಳ್ಳಿ ||

----------------------------------

ನೋಂದಣಿ ಐಡಿ : KPF-S1-5082

0
Votes
158
Views
1 Year
Since posted

Finished since 352 days, 15 hours and 4 minutes.

Scroll to Top