Submission 685

ಬೇಸಿಗೆ

ರಚನೆ : ಸುರೇಶ್ ಬಾಬು ಆರ್

----------------------------------

ಬಿರು ಬೇಸಿಗೆ ಕಿರು ಆಸೆಗೆ ಕುಡಿ ಮಜ್ಜಿಗೆ ಜೀವ ತಂಪಿಗೆ ಬಾ ಹೋಗುವ ಕಡಲ ಬೀದಿಗೆ ನಡು ಬಿಸಿಲಿಗೆ ಅಲೆಯ ಸದ್ದಿಗೆ ಎದೆಯ ಮಾತಿಗೆ ಮೌನ ಪ್ರೀತಿಗೆ ನೀರಿಗಿಳಿದು ಹಾಡಿ ನಲಿದು ನೇಸರನ ಕಳಸಿ ಚಂದಿರನ ಕರೆಸಿ ತಾರೆ ದೀಪಗಳ ಹಚ್ಚಿ ಬಾನಲಿ ತಂಗಾಳಿ ಹಾಡಿಗೆ ಕಡಲು ಕುಣಿಯಲಿ ಬಾನಯಿರುಳ ನೋಡುತ ಪುಟ್ಟ ಕಣ್ಣಲಿ ಆನಂದ ಸಾಗರದಲ್ಲಿ ಹೀಗೆ ಕಳೆಯುವ ನಿತ್ಯ ಬೇಸಿಗೆ ನಿತ್ಯ ಹೊಸದಾಗಿ ನಾನು ನೀನು ಒಟ್ಟಿಗೆ ಒಟ್ಟಿಗೆ ...

----------------------------------

ನೋಂದಣಿ ಐಡಿ : KPF-S1-5295

0
Votes
164
Views
1 Year
Since posted

Finished since 347 days, 12 hours and 19 minutes.

Scroll to Top