Submission 639

ಸಂಚಾರಿ

ರಚನೆ : ವಾದಿರಾಜ ಬಿ ಹಯಗ್ರೀವ

----------------------------------

ನಿನ್ನ ಸೇಹವೆಂಬ ತೋಟದಿ ಎನ್ನ ಹೃದಯವು ಸಂಚಾರಿಯಾಗಿರಲು ಕಣ್ ಸೆಳೆತದ ಮುಂಗಾರಿಗೆ ಘಮ್ ಎಂದಿತು ಮಣ್ ವಾಸನೆ ಪರಿಚಿತವೀ ಶ್ವಾಸಾನುಭವ ಎನಗೆನೆ ಇಳಿಯಿತು ಸೋತು ಹೃದಯ ಕಾಣದಂಗಳಕೆ ಸ್ವಜನರ ನಡುವೆ ಕಾಣದೂರದೂರಿನ ಅಲೆಮಾರಿಯ ಮೇಲೆ ಎಂತು ಆ ಅಭಿಮಾನ ಪ್ರಯಾಣದ ದರವು ಹೆಚ್ಚಾಗಿರಲು ಆ ಕ್ಷಣ ಭರಿಸಲು ಆಯ್ತು ಅಲ್ಲಿದ್ದ ಸಲಿಗೆಯ ಬಣ ಕಾದ ಹೃದಯವು ಅಂಕುರಿಸಿರಲು ಪ್ರೇಮವೆಂಬ ಚಿಗರು ಸ್ಪುರಿಸಿದೆ ಸ್ನೇಹವೆಂಬ ಮಣ್ಣಿನಿಂದ ಅದ ನೀ ಮುಚ್ಚಬೇಡ ಆಳವಾಗಿ ಬೇರೂರಿದರೆ ಎನ್ನನು ನೀ ದೂರಬೇಡ

----------------------------------

ನೋಂದಣಿ ಐಡಿ : KPF-S1-5243

0
Votes
135
Views
1 Year
Since posted

Finished since 348 days, 1 hours and 28 minutes.

Scroll to Top