Submission 972

ನನ್ನ ಅಮ್ಮ

ರಚನೆ : ವೀರೇಶ ಎಂ ಕೆ

----------------------------------

ಹಡೆದಳು ,ಎತ್ತಿ ಆಡಿಸಿದಳು , ಮಡಿಲಲಿ ಮಲಗಿಸಿ,ಹಾಲನು ಉಣಿಸುವಳು ... ತುತ್ತನು ಇಟ್ಟು,ಮುತ್ತನು ಕೊಟ್ಟು ಜೊತೆಯಲಿ ಸಾಗಿ, ತೊಟ್ಟಿಲ ತೂಗಿ ,ಜೋ ಲಾಲಿಯ ಹಾಡಿ ಮಲಗಿಸುವಳು... ಪುಟ್ಟ ಕಾಲಿಗೆ ಗೆಜ್ಜೆಯ ತೊಡಿಸಿ,ಹೆಜ್ಜೆಯ ಜೊತೆಗೆ ಹೆಜ್ಜೆಯನಿಡಿಸಿ, ತಪ್ಪಿದ ಹೆಜ್ಜೆಗೆ ಕೈಯನು ಕೊಟ್ಟು ನಡೆಸುವಳು... ಅಕ್ಷರ ಕಲಿಸಿ, ಪದ ಪದ ಜೋಡಿಸಿ, ತೊದಲು ನುಡಿಸಿ,ಮಾತನು ಕಲಿಸುವಳು... ಬುದ್ದಿಯ ಜೊತೆಗೆ ವಿದ್ಯೆಯ ಕಲಿಸಿ, ಗುರುವಿನ ಜೊತೆಗೆ ಗುರಿಯನು ತಲುಪಿಸಿ, ಜೀವನ ನಡೆಸಲು ಕಾರಣವಾಗುವಳು... ಉಸಿರಿರೋ ತನಕ ಪ್ರೀತಿಯ ಕೊಟ್ಟು, ಜೀವಕೆ ಜೀವನವನ್ನೇ ಮುಡಿಪಾಗಿಟ್ಟು ಜೀವವ ಬಿಟ್ಟು ಕೊನೆಯುಸಿರೆಳೆದವಳು... ನನ್ನ ಅಮ್ಮ

----------------------------------

ನೋಂದಣಿ ಐಡಿ : KPF-S1-5460

0
Votes
235
Views
1 Year
Since posted

Finished since 406 days, 12 hours and 0 minutes.

Scroll to Top