ಶೇಂಗಾ ಚಟ್ನಿ ನನ್ನ ಕವನ!
ರಚನೆ : ರಾಖೇಶ ಬೂದಿಹಾಳ
----------------------------------
ಹಾಸ್ಟೆಲ್ ಆಗದೆ ಬಿದ್ದು ಒದ್ದಾಡಿದಂತಹ ಸಮಯ ಊಟಕ್ಕೆ ಪೇಚಾಡಿದ್ದು ಅಂತೂ ತೀರ ವಿಸ್ಮಯ. (ಯ) ನಾಲಿಗೆ ನೊಂದಿಕೊಂಡಿತು ಸಪ್ಪೆಯ ಊಟಕ್ಕೆ ಶೇಂಗಾ ಚಟ್ನಿ ಆಸರೆಯಾಗಿತ್ತು ನಾಲಿಗೆಯ ಹರುಷಕ್ಕೆ.(ಕ್ಕೆ) ಶೇಂಗಾ ಚಟ್ನಿ ನನ್ನ ಕವನ. ಅರ್ಧ ಮುರ್ದ ಹಸಿದ ಹೊಟ್ಟೆಯಲಿ ತಿರುಗಾಟ. ಅರ್ಧ ಮುರ್ಧ ಹಸಿದ ಹೊಟ್ಟೆಗೆ ವಿದಾಯ ನೀಡಲು ಶೇಂಗಾ ಚಟ್ನಿಯ ಹುಡುಕಾಟ.(ಟ) ಶೇಂಗಾ ಚಟ್ನಿ ನನ್ನ ಕವನ. ಶೇಂಗಾ ಚಟ್ನಿ ನೀನೆಂದರೆ ಬಲು ಇಷ್ಟ! ಶೇಂಗಾ ಚಟ್ನಿ ನನ್ನ ನಾಲಿಗೆಗೆ ನೀನೆಂದರೆ ಅದೆಷ್ಟೋ ಇಷ್ಟ. (ಷ್ಟ) ಶೇಂಗಾ ಚಟ್ನಿ ನನ್ನ ಕವನ. ಅನ್ನಕ್ಕೆ ನಿನ್ನನ್ನು ಬೆರೆಸಿದಾಗ ನೋಡಲು ನೀನು ಎಷ್ಟು ಚೆಂದ! ಕೈಯಿಂದ ಕಲಿಸಿ ಉಂಡೆ ಮಾಡಿ ಬಾಯಿಗೆ ತುತ್ತು ಇಟ್ಟಾಗ ಆಹಾ! ನಾನೆಷ್ಟು ಆನಂದ.(ದ) ಶೇಂಗಾ ಚಟ್ನಿ ನನ್ನ ಕವನ. ಮರೆಯಲಾರೆ ಮರೆಯಲಾರೆ ನಿನ್ನ ಎಂದೆಂದಿಗೂ. ನೆನೆಯುವೆನು ನೆನೆಯುವೆನು ನಿನ್ನ ಎಂದೆಂದಿಗೂ. (ಗ) ಶೇಂಗಾ ಚಟ್ನಿ ನನ್ನ ಕವನ.
----------------------------------
ನೋಂದಣಿ ಐಡಿ : KPF-S1-5453