ಮುಗುಳು ನಗೆ
ರಚನೆ : ಮಂಜುನಾಥ ಗಣಪತಿ ಹೆಗಡೆ
----------------------------------
ಎಂಥ ಸುಂದರ ಕಣ್ಣುಗಳು ನಿನ್ನದು ಅದನ್ನು ಈಗ ನೋಡುವ ಭಾಗ್ಯ ನನ್ನದು ಚೆಂದದ ಮುಗುಳು ನಗೆಯ ಹಿಂದೆ ಏನದು ಕಷ್ಟದ ಬದುಕು ನಿನ್ನದಾದರೂ ಬೇಸರ ವಾಗದು ಕುಂಭ ಮೇಳದ ಜನಸಾಗರ ದಲ್ಲಿ ಕಂಡೆ ನೀನು ರುದ್ರಾಕ್ಷಿ ಸರಗಳ ಮಾರುತ್ತ ಬಂದೆಯೇನು ನಿನ್ನಂದ ನೋಡಿ ಮಾತನಾಡಿಸಿದಾಗ ಹೆದರಿದೆ ಯೇನು ಜನರ ಹೊಗಳಿಕೆ ನೋಡಿ ಸೌಂದರ್ಯ ಇಮ್ಮಡಿ ಆಯಿತೇನು? ನಿನ್ನ ಕಣ್ಣುಗಳ ಆಕರ್ಷಣೆಗೆ ಮನ ಸೋಲದವರಿಲ್ಲ ಎದುರಿಗೆ ಬಂದಾಗ ಮಾತನಾಡಿಸದೇ ಮುಂದೆ ಹೋದವರಿಲ್ಲ ನಿನ್ನ ಕೈಯಲ್ಲಿದ್ದ ಮಣಿಯ ಸರಗಳ ಖರೀದಿಸಿದವರಿಲ್ಲ ನಿನ್ನ ತಾರುಣ್ಯದ ಅಂದ ನೋಡಿ ಬೆರಗಾಗಿ ಹೋದರಲ್ಲ
----------------------------------
ನೋಂದಣಿ ಐಡಿ : KPF-S1-5434