Submission 882

ನಾನಾಗಿರುವೆ ಅರಿವೇ ಇಲ್ಲದ ಗಾಳಿಪಟ...

ರಚನೆ : ಕುಮಾರ್ ಬಿ

----------------------------------

ನಾನಾಗಿರುವೆ ಅರಿವೇ ಇಲ್ಲದ ಗಾಳಿಪಟ... ಬದುಕಿನ ಗಾಳಿಯಲಿ ಹಾರುತಿಹೆನು ಮಾರ್ಗವಿಲ್ಲ, ಜೀವನ ಬಂಡಿಯಲಿ ತೇಲುತಿಹೆನು ಸೂತ್ರವಿಲ್ಲ, ನಾನಾಗಿರುವೆ ಅರಿವೇ ಇಲ್ಲದ ಗಾಳಿಪಟ... ನನ್ನೊಲವ ಭೇಟಿಗೆ ಕಾಯುವೆ ಅಲೆಯುತ ನಿತ್ಯ, ಬರುವುದು ಆ ಘಳಿಗೆ, ಇದುವೇ ಸತ್ಯ, ನಾನಾಗಿರುವೆ ಅರಿವೇ ಇಲ್ಲದ ಗಾಳಿಪಟ... ನೀಲಮೇಘದಲಿ ನೀಲಿ ನೀಲಿ ತಾರೆಗಳ ಎಣಿಸುತಾ ಬೆಳೆದೆ ನಾ, ದೂರದ ಚಂದಿರನ ನಿಂತಲೇ ನೋಡುತಾ ಕಣ್ತುಂಬಿದೆ ನಾ, ನಾನಾಗಿರುವೆ ಅರಿವೇ ಇಲ್ಲದ ಗಾಳಿಪಟ....

----------------------------------

ನೋಂದಣಿ ಐಡಿ : KPF-S1-5407

0
Votes
113
Views
10 Months
Since posted

Finished since 251 days, 13 hours and 16 minutes.

Scroll to Top