ಪಯಣ
ರಚನೆ : ಡಾ. ಐಶ್ವರ್ಯ. ಮುತ್ತಣ್ಣ
----------------------------------
ಸಾಗುತಿದೆ ನಿನ್ನೆಗಳ ಅಮಲಿನಲಿ ನಾಳೆಗಳ ಹಂಬಲಿನಲಿ ದೂರವಿದೆ ತಲುಪುವ ತಾಣವಿನ್ನು ಹೊತ್ತು ನೀ ಜವಾಬ್ದಾರಿಯ ಚೀಲವನ್ನು ಸಿಗುವರು ಸಾಗುವವರೆಗೂ ಅದೆಷ್ಟೋ ಕೂರುವರು ಜೊತೆಯಲಿ ಇನ್ನೆಷ್ಟೋ ಉಳಿವರು ನಿನ್ನಲಿ ಹಿಡಿಯಷ್ಟು ಸಾಗು ನೀ ನಿನ್ನ ನಂಬಿ ಸಾಧಿಸುವಷ್ಟು ಜಾರಬೇಡ ನಿದ್ರೆಗೆ ಮಧ್ಯ ಎಚ್ಚರಿಸುತಿದೆ ಸ್ಪರ್ಧೆಯ ಶಬ್ದ ಚಲಿಸು ನಿಧಾನವಾಗಿ ಏರುಪೇರಲಿ ತಲುಪುವೆ ನೀ ಪಯಣವ ನಗುವಿನಲಿ...
----------------------------------
ನೋಂದಣಿ ಐಡಿ : KPF-S1-5398