ಶಿವಶಕ್ತಿ
ರಚನೆ : ಮಾನಸ ಕುಮಾರ
----------------------------------
ಮಸಣದಿ ಚಿತೆಯ ಕಾವಲು ಕಾಯುವ ಒಬ್ಬಂಟಿಗನು ನಾನು.. ಸುಪ್ಪತ್ತಿಗೆಯಲ್ಲಿ ಬೆಳೆದ ಅರಮನೆಯ ಯುವರಾಣಿಯು ನೀನು.. ಕಪಾಲದ ಬೂದಿಯ ಮೈಯೆಲ್ಲ ಬಳೆವ ಅಗೋರನು ನಾನು.. ಕಮಲದ ಹೂವಿನಲ್ಲಿ ಅರಳಿದ ಸುಂದರ ದೇವತೆಯು ನೀನು.. ರೂಪವೇ ಇಲ್ಲದ ಕಲ್ಲಿನ ಲಿಂಗನಾದ ನಿರಾಕಾರನು ನಾನು.. ನಿಷ್ಕಲ್ಮಶ ಮನದ ಒಲವಿನ ಪ್ರತಿರೂಪವೂ ನೀನು.. ಕೈಲಾಸದಲ್ಲಿ ತಪಸ್ಸಿಗೆ ಕೂತ ಎನಗೆ,ಒಲವಿನ ವರವನು ಕೊಟ್ಟೆ.. ಬೂತಗಳ ನಾಯಕನಾದ ನನಗೆ,ದೇವರ ಪಟ್ಟವ ಕೊಟ್ಟೆ.. ಶವಗಳ ನಡುವೆ ಇದ್ದ,ನನ್ನ ವರಿಸಿ ಶಿವನ ದರ್ಜೆಯ ಕೊಟ್ಟೆ.. ಇಡಿ ಸಂಪತ್ತು,ಬಡವನಾದ ನನಗಾಗಿ ನೀ ಬಿಟ್ಟು ಬಂದುಬಿಟ್ಟೆ.. ಯಾರೂ ಬಯಸದ ನನಗೆ,ನಿನ್ನಲ್ಲಿ ಅರ್ಧಭಾಗವ ಕೊಟ್ಟುಬಿಟ್ಟೆ.. ಏಕಾಂಗಿಯಾದ ನನಗೆ ಪ್ರೀತಿಯ ಶಕ್ತಿಯೇ ನೀನಾಗಿಬಿಟ್ಟೆ..
----------------------------------
ನೋಂದಣಿ ಐಡಿ : KPF-S1-5395