ಹೊಸತನದ ಉತ್ಸಾಹ - ಸೂರ್ಯಸ್ತ
ರಚನೆ : ಸಿದ್ದನಗೌಡ ಪಾಟೀಲ್
----------------------------------
ಮುಸುಕು ತುಂಬಿದ ಬಾಳ ಪಯಣದಿ, ಹೊಮ್ಮಲಿ ಹೊಂಗಿರಣ ಮನದ ಕತ್ತಲೆ ಅಳಸಿ ಬೆಳಗಲಿ,ಸೂರ್ಯ -ರಶ್ಮಿಯ ಆಲಿಂಗನ ದಿನದ ಭವಣೆಯ, ಬಿಸಿಲ ಬೇಗೆಯ,ತಣಿಸಿ ಮಲಗಿದ ನೇಸರ, ದಿನಮಣಿಯು ಹೊತ್ತು ತರಲಿ,ನಾಳೆ ನಗುವಿನ ಸಡಗರ ಮೋಡದ ಮರೆಯಲ್ಲಿ ನಿಂತು,ಬಿಟ್ಟ ಬೆಳಕಿನ ಬಾಣವು ಕವಿಯುತಿಹ ಬೇಸರದ ತಮವನು, ಕರಗಿಸುವ ತ್ರಾಣವು ಆಸೆ ಮೂಡಿತು ಹೀಗೆ ನಿನ್ನನ್ನು ಕಂಡ ಕ್ಷಣ,ಓ ದಿನಕರ ಮುಳುಗಿ ಮತ್ತೆ ಮೇಲೇಳಲು,ನಿನ್ನಂತೆಯೇ ಹೇ ಭಾಸ್ಕರ!!
----------------------------------
ನೋಂದಣಿ ಐಡಿ : KPF-S1-5376