Submission 800

ಪ್ರಕೃತಿಯಲಿ ಪರಮಾತ್ಮ

ರಚನೆ : ಮಮತಾ ಗೀ ಸಾಸನೂರ

----------------------------------

ಪ್ರತಿ ಎಲೆಯ ಹಸಿರಲಿ ನೀನಿರುವೆ.. ಹೂವ ಕಂಪಲಿ ಬರುವೆ ಅನುಭವಕೆ.. ಗಾಳಿ ತಂದ ತಂಪಲಿ ನಿನ್ನ ಶಾಂತಿಯೇ... ಬೆಳೆದ ನಿಂತ ಬೆಳೆಯಲಿ ನಿನ್ನ ಇರುವಿಕೆ ಚಂಡಮಾರುತ ರೌದ್ರ ರೂಪ ಮೃಗ ಖಗದ ಕೂಗಾಟ,ನಿನ್ನ ಕೋಪ ಜಗದ ಜಲರಾಶಿ, ನಿನ್ನ ಕೇಶದಲಿ ಬಾನಿನ ಬಣ್ಣವೇನು ನಿನ್ನ ಕಂಠದ ನೀಲಿ ಕಣ್ಣ ಬೆಳಕಿನ ಹೊಳಪು ಶಶಿಗೆ ಬೆಳಕು ಸೆಳೆಯಲು ನಿನ್ನ,ಒಂದು ಬಿಲ್ವ ಸಾಕು.. ಬೂದಿ ಬಳೆದ ಬೃಹದಾಕಾರ.. ಕಂಡಿರುವೆ ಯಾರಿಗೆ ನೀ ನಿರಾಕಾರ....

----------------------------------

ನೋಂದಣಿ ಐಡಿ : KPF-S1-5363

0
Votes
186
Views
1 Year
Since posted

Finished since 406 days, 13 hours and 7 minutes.

Scroll to Top