Submission 794

ಪ್ರೀತಿ

ರಚನೆ : ಶ್ವೇತಾ ನರೇಂದ್ರಮಠ

----------------------------------

ಬೆಳಗುತಿದೆ ನಿನ್ನೊಲವಿನ ದೀಪ ನನ್ನೆದೆಯ ಬಾನಂಗಳದಲಿ.. ಕಾಯುತ್ತಿದೆ ಕೊಲ್ಮಿಂಚೊಂದು ನಿನ್ನನೇ ಕಾಣಲು ಕಣ್ಣಲ್ಲಿ.. ಬರೆಯುವ ಪದಗಳಿಂದು ಮರೆತಿರುವೆ ನಿನ್ನ ನೆನಪಲ್ಲಿ.. ನಿನ್ನೊಲವಿನ ನೆಪದಲ್ಲಿ.. ತಂಗಾಳಿಯೊಂದು ಬೀಸಿದೆ ನನ್ನೆಲ್ಲ ಭಾವನೆಗಳ ನಿನ್ನೆಡೆಗೆ ತಲುಪಿಸಲು.. ಮಳೆಯ ಹನಿಯೊಂದು ನಿಂತಿದೆ ಬೊಗಸೆಯಲ್ಲಿ ಸಿಹಿಗನಸ ನಿನ್ನ ಜೊತೆಗೆ ಕಾಣಲು.. ನಾ ಹಾಡದ ಹಾಡೊಂದು ನಾಲಿಗೆಯು ತಾನಾಗೇ ನುಡಿಯಲು.. ಬರೆಯದ ಬರವಣಿಗೆಯು ನಿನಗೆಂದೇ ಸಾಲುಗಳ ಬರೆಯಲು.. ಮನವಿಂದು ಬಯಸಲು ನಿನ್ನ ಕಾಣಲು ನಿನ್ನ ಜೊತೆಯಾಗಲು..

----------------------------------

ನೋಂದಣಿ ಐಡಿ : KPF-S1-5360

0
Votes
145
Views
1 Year
Since posted

Finished since 355 days, 14 hours and 38 minutes.

Scroll to Top