ಬೆಳವಣಿಗೆ
ರಚನೆ : ಪ್ರವೀಣ್ ಕುಮಾರ್ ಬಿ ಕೆ
----------------------------------
ನಾ ಹುಟ್ಟಿದೆ.. ಅಪ್ಪ ಅವ್ವ ಹುಟ್ಟಿದರು... ನಾ ಬೆಳೆದೆ.. ಅವರು ಬೆಳೆಯಲೇ ಇಲ್ಲ... ನಾ ಕೇಳಿದೆ.. ಯಾಕೆ ನೀವು ಬೆಳೆಯುತ್ತಿಲ್ಲ? ಅವರೆಂದರು.. ನಮಗಿಷ್ಟೇ ಸಾಕು.. ನೀ ಬೆಳೆ.. ಜಗದ ಉದ್ದಗಲಕ್ಕೂ ಬೆಳೆ.. ತೊಳೆ ನೀ ಈ ಜಗದ ಕೊಳೆ.. ಪಾತಾಳದಾಳಕ್ಕೂ ಇಳೆ.. ನಾ ಬೆಳೆದೆ ನನ್ನ ಬಾಳೆಲ್ಲ.. ಅನ್ನಿಸಿತು ಅಂದಂತೆ ಬಾಳಿಲ್ಲ .. ಅವ್ವ ಅಪ್ಪರಷ್ಟೂ ನಾ ಬೆಳೆದಿಲ್ಲ..
----------------------------------
ನೋಂದಣಿ ಐಡಿ : KPF-S1-5342