Submission 757

ನಾವು ಸೋತವರು

ರಚನೆ : ರಾಮಕೃಷ್ಣ . ಎನ್

----------------------------------

ಕಾರಣವಿಲ್ಲದೆ ನಗುವ ನಾವು ಹುಚ್ಚರು ನಿಮಗೆ ಆ ನಗುವಿನಿಂದಿನ ನರಕ ತಿಳಿಯುವುದೆಂದು ನಿಮಗೆ. ಸೋತರು ಸ್ವಾಭಿಮಾನದಿಂದ ಸೋತೆವು ನಿಮ್ಮಿಂದ ಸಿಗಲಿಲ್ಲ ಸಾಧಕರೆಂಬ ಪಟ್ಟ ನಮಗೆ ನಾವೆಂದೂ ಸೋತವರಲ್ಲ ಹಲ್ಲು ಕಿಸಿದು ನಗಬೇಡಿ ನೀವು. ಮತ ಕೇಳಿದವರು ನಮ್ಮ ಕಷ್ಟಕ್ಕೆ ಮರುಗಲಿಲ್ಲ ಲಂಚ ಕೇಳಿದವರಿಗೆ ನಮ್ಮ ಬಡತನ ಕಾಣಿಸಲಿಲ್ಲ. ಕನಸೆಂಬ ಹಸಿವಿನಲ್ಲಿ ಅತ್ತೆವು ಬಿಕ್ಕಿ ಬಿಕ್ಕಿ ನಮ್ಮ ಸೋಲು ಕಂಡ ನಿಮಗೆ ನಾವು ಕಾಣದಾದೆವು.

----------------------------------

ನೋಂದಣಿ ಐಡಿ : KPF-S1-5339

0
Votes
124
Views
1 Year
Since posted

Finished since 311 days, 16 hours and 29 minutes.

Scroll to Top