ಭಾವದೊಲುಮೆಯ ಪ್ರೀತಿ
ರಚನೆ : ಅಮೃತ್
----------------------------------
ಬರಿದಾಗದಾ ಜೀವಸೆಲೆ ನೀನು ಭಾವನೆಗಳನು ಹೊತ್ತ ಭಾವಜೀವಿ ನಾನು ಭಾವಾಂತರಂಗದೊಳಗಿರುವ ನಿನ್ನ ನಾ ಏನೆಂದು ಭಾವಿಸಲಿ ಅಪೂರ್ಣತೆಯ ಬದುಕಲಿ ಪೂರ್ಣತೆಯ ಕಾವ್ಯದಂತಿರುವ ನಿನ್ನ ನೀನಿಲ್ಲದಿರೆ ಭುವಿಯು ನಿಶ್ಚಲವಾದಂತೆ ಈ ಪ್ರೀತಿಯ ಘಮಲೊಳಗೆ ನಿಷ್ಕಾಮ ಪ್ರೀತಿಯಷ್ಟೇ ಆದ್ಯತೆಯ ಭದ್ಧತೆ ಬದ್ಧತೆಯಾದ್ಯತೆ ಇದ್ದರೆ ಭವದಿ ಪ್ರೀತಿ ಶಾಶ್ವತ ಭಾವದಿ ಜೀವದಿ ನೀ ಬದುಕಿಗೊಂದಾಸರೆ ನಿನ್ನ ಪ್ರೀತಿಯ ವಿಶ್ವಾಸದ ಪ್ರತಿಭಾವಕೂ ನನ್ನದೊಂದು ನಮನ
----------------------------------
ನೋಂದಣಿ ಐಡಿ : KPF-S1-5334