ಬಯಕೆ
ರಚನೆ : ನಿವೇದಿತಾ. ಶಿರೋಳ
----------------------------------
ಕಂಡಂತೆ ಕಾಣದು ಎಲ್ಲವೂ ಇರುವುದನ್ನು ಹಾಗೆ ಇರಲಿ ಬಿಡು ನಾಳೆಯೂ; ಇರದು ಎಂದು ಇರುವುದು ನನ್ನೀ ಈರುವಿಕೆಯು ಎಂದಿಗೂ, ಬಯಕೆಯ ಬಲೆಯಲಿ ಬೆಂದಿರುವುದು ಬಯಸಿದ ಈ ಬಯಕೆ. ಮನಸಿನ ಮಾತು ಬರೇ ಮಾತಾಗಿ ಮನಸ್ಸಿನೊಳಗೆ ಮರಗುವುದು ಮರಗಿ ಕೊರಗುವುದು. ಮರೆಯಲಾಗದ ಆ ಕ್ಷಣಗಳು, ಮರಳಿಬಾರದು ಎಂದು ಆ ದಿನಗಳು, ಆಗದು ಎಂದು ಅನಿಸಿದರೂ ಆದರೂ ಆಗುವುದು ಎನ್ನುವ ಆಗಸದಷ್ಟು ಅಬ್ಬರ ಬಯಕೆ ಭಾರವಾಗಿ ಭಾವನೆಯು ಬೆಂದು ಬಿಸಿಯಾಗಿದೆ ಬಿಗಿದಪ್ಪಿ ಎದೆಗೆ ಒರಗುವೇನು ಕಣ್ಣಂಚಲಿ ಒರೆಸಲು ಬರುವೆ ಎಂದು ಕಾದಿರುವೇನು ಬಯಕೆಯ ಬಾಗಿಲು ತೆರೆದಿರುವೇನು ಬಾರದೆ ಏಕೆ ನಿಂತಿರುವೆ ಬಹುದುರಾ? ಆದರು ಕಾಯುವೇನು ನಿ ಬರುವೆಯಾ? ಕಂಡಂತೆ ಕಾಣದು ಎಲ್ಲವೂ ಇರುವುದನ್ನು ಹಾಗೆ ಇರಲಿ ಬಿಡು ನಾಳೆಯೂ
----------------------------------
ನೋಂದಣಿ ಐಡಿ : KPF-S1-5300