Submission 625

ಅವಳೇ ನನ್ನಕ್ಕಾ

ರಚನೆ : ಶರಣ ಮಂಜಯ್ಯ ನಾಯ್ಕ

----------------------------------

ಒಡಲ ಬಳ್ಳಿಯ ಬಂಧಕೂ ಮಿಗಿಲು ಕರುಣೆಯಲಿ ಅವಳದು ತಾಯಿಯ ಒಡಲು ಹುಸಿಯಿಲ್ಲದ ಪ್ರತಿಮಾತಿನಲು ಹಸುವಿನ ನಿರ್ಮಲತೆ ಪಸರಿಸುವವಳು ಸಾವಿರ ಸ್ವರ್ಗಕ್ಕೂ ಮಿಗಿಲು ನಿನ್ನ ಮಮತೆಯ ಮಡಿಲು ಶರಧಿಯ ಮನದೊಳು ಇಳೆಯ0ತ ಗುಣದೋಳು ಅವಳೇ ನನ್ನಕ್ಕ. ಇಳೆಯೊಳಗಿನ ಪರಿಪೂರ್ಣ ಲತೆಯು ನೀ ಅಮ್ಮನ ವಾತ್ಸಲ್ಯದ ಛಾಯೆಯು ನಿನ್ನ ಮನ ನಿಷ್ಕಲ್ಮಶ ಪ್ರೀತಿಯ ಗಣಿ ಪ್ರೀತಿ ವಾತ್ಸಲ್ಯದ ರಾಜ್ಯಕೆ ನೀನೆ ರಜನಿ ಜಗದ ಕೊಂಕು ಮಾತುಗಳ ಸಹಿಸಿಕೊಂಡವಳು ನೋವುಂಡು ತುಸು ನಕ್ಕೂ ಸುಮ್ಮನಾದವಳು ಅವಳೇ ನನ್ನಕ್ಕ.

----------------------------------

ನೋಂದಣಿ ಐಡಿ : KPF-S1-5226

0
Votes
182
Views
1 Year
Since posted

Finished since 406 days, 12 hours and 2 minutes.

Scroll to Top