Submission 603

ವರ್ಷಧಾರೆ

ರಚನೆ : ದಾಸ್ಟೇಜರ್ ನದಾಫ್

----------------------------------

ಇಳೆಗೊಂದು ಜೀವಕಳೆ ತುಂಬಿರಲು ಜಡಿ ಮಳೆ ಹಸಿರಾಗಿರಲು ಭೂರಮೆ ಹೆಚ್ಚಾಗಿರಲು ರೈತನ ಮೇಲೆ ಕೂರ್ಮೆ ವರ್ಷಧಾರೆಯ ಹರ್ಷ ಹೊರದು|| ಮೈದುಂಬಿರಲು ಹಳ್ಳ ಕೊಳ್ಳ ಬಿಸಿಲು ಮಳೆಯ ಕಳ್ಳಾಟ ಇದರ ಮಧ್ಯ ಕಾಮನಬಿಲ್ಲಿನ ವಿಹಂಗಮ ನೋಟ ವರ್ಷಧಾರೆ ಹರ್ಷ ಹಿರಿದು|| ಆಕಾಶದ ಚಪ್ಪರ ಹರಿದು ಜನ ಕೆಲಸ ಕಾರ್ಯವ ತೊರೆದು ಅಪಸ್ವರದಿ ವರ್ಷಧಾರೆಯ ಜರಿದು ಮೌನದಿ ಕ್ಷಣಿಕ ಮೋಡ ಸರಿದು ವರ್ಷಧಾರೆ ಹರ್ಷ ಹಿರಿದು||

----------------------------------

ನೋಂದಣಿ ಐಡಿ : KPF-S1-5191

0
Votes
116
Views
1 Year
Since posted

Finished since 305 days, 4 hours and 55 minutes.

Scroll to Top