ಕುಹೂ.. ಕುಹೂ..
ರಚನೆ : ಗೂಳೇಶ್
----------------------------------
ಹಕ್ಕಿ ಹಾಡ್ತೈತೋ ಅಳತೈತೋ ಅರಿಯಾದಾಗಿದೆ ಈ ಮನ ನಿತ್ಯ ಸುರಿವ ಸೋನೆ ಮಳೆಯಲ್ಲಿ ಮರದೆಲೆ ಅಡಿ ರೆಂಬೆಯ ಮೇಲಣ ಕೂತು ಕಣ್ ಕಣ್ ಬಿಟ್ಟು, ಕತ್ತು ಅತ್ತ ಇತ್ತ ತಿರುವಿ ಏನನ್ನೋ ಹಂಬಲಿಸಿ ಕುತೂಹಲದಿ ಕೂತು ಕುಹೂ.. ಕುಹೂ.. ಎಂದು ಕರೆದಂತೆ ತನ್ನ ಕಂಠದ ಏರಿಳಿತ ಧ್ವನಿಯಲ್ಲಿ ತನುವ ಮರೆತು ಮೈಮರೆತು ಸೋನೆ ಮಳೆಯ ನಿಶ್ಶಬ್ಧದಲ್ಲೂ ಹಕ್ಕಿ ಹಾಡ್ತೈತೋ ಅಳತೈತೋ ಅರಿಯಾದಾಗಿದೆ ಈ ಮನ
----------------------------------
ನೋಂದಣಿ ಐಡಿ : KPF-S1-5166