ಜೀವನದಾಟ
ರಚನೆ : ಅಚಲ ಎಚ್.ಜಿ
----------------------------------
ಪದವಿಗಳಿಗಾಗಿಯೇ ಕಾದಾಟ ಸುಮ್ಮನಿರಲಾರದೆ ವಟ ವಟ ಬೆಂಬಿಡದ ಒಂದಷ್ಟು ಚಟ ಕಡಿಮೆ ಇಲ್ಲ ಅವಶ್ಯಕತೆಗಳ ಕಾಟ ಎಲ್ಲರೂ ಸೇರಿರಲು ಒಂದು ಕೂಟ ದೊಡ್ಡಸ್ತಿಕೆಯ ಮಾರಾಟ ಸೌಮ್ಯತೆಯಿಂದಲೇ ಕೆಸರೆರಚಾಟ ಎಂದು ಮುಗಿಯದ ಕಪಟ ಗೆಲ್ಲಲೇ ಬೇಕೆಂಬ ಹಟ ಆಸೆಗಳೆಲ್ಲವೂ ಸೂತ್ರವಿಲ್ಲದ ಪಟ ಕಗ್ಗಂಟಾಗುತ್ತಿರಲು ಸಂಕಟ ನಿರ್ಲಿಪ್ತವಾಗಿದೆ ಅಂತರ್ಪಟ ಬಡಿದಾಡುತ್ತಲೇ ನಡೆದಿದೆ ಓಟ ಇದುವೇ ಜೀವನದ ಆಟ ಆದಿ ಅಂತ್ಯ ವಿರದ ಕೂಟ ಎಡವಿದಾಗಲೆಲ್ಲ ಒಂದು ಪಾಠ
----------------------------------
ನೋಂದಣಿ ಐಡಿ : KPF-S1-5130