Submission 489

ನವೀನತೆಯ ಕಲಿಕಾ ತತ್ವ

ರಚನೆ : ಶ್ವೇತ . ವಿ

----------------------------------

ನವಯುಗದ ಕುಲುಮೆಯ ಜ್ವಾಲೆಯು ಉಕ್ಕುತಿಹ ಕಾಲ, ಪೊಡೆಯಲ್ಲಿರುವ ಪಿಂಡಕ್ಕೆ ನವೀನತೆಯ ಎಲರ ಎರಚುವ ಕಾಲ. ಧುಮ್ಮಿಕ್ಕುವ ಮನೋರಥ ಪಡೆಯಲು, ಪಿಂಡಕ್ಕೆ ಆಡಂಬರದ ದಿವ್ಯಾಸ್ತ್ರ ಕೈಗೆ ನೀಡುವ ವಾಂಛೆ. ನವಯುಗದ ಬಿಸಿಗಾಳಿಯ ಪಥಕೆ ಸಿಕ್ಕಿ ಕಂಪಿಸಿತೆ ಮಕ್ಕಳ ಈ ಬಾಲ್ಯ, ಪರಕೀಯತೆ ಪರತಂತ್ರದ ಮೋಹ ಆಕರ್ಷಣೆಗೆ. ಮಕ್ಕಳ ಈ ಶೈಶವ್ಯವ ತರ್ಪಣ ಬಿಡುವಂತಾಯಿತೆ! ಸುಭದ್ರೆಯ ಪೊಡೆಯಲ್ಲಿನ ಅಭಿಮನ್ಯು, ವ್ಯೂಹ ಭೇದಿಸುವುದ ಕಲಿತನೆಂಬುದು ಆಧುನಿಕತೆಯ ವಾದ. ವೀರ ಮರಣವನಪ್ಪಿದರೂ ಸಂಪೂರ್ಣ ಆಯಸ್ಸು ದೊರೆಯಲಿಲ್ಲವೆಂಬುವುದೇ ವ್ಯೂಹದ ಸಾರ. ಈ ತತ್ವವನ್ನು ಒಪ್ಪದೆ, ನವತತ್ವದ ಕಲಿಕೆಗೆ ತರಗೆಲೆಗಳಾಯಿತು ನಮ್ಮ ಈ ಮಕ್ಕಳ ಬಾಲ್ಯ...

----------------------------------

ನೋಂದಣಿ ಐಡಿ : KPF-S1-5056

0
Votes
131
Views
1 Year
Since posted

Finished since 311 days, 16 hours and 52 minutes.

Scroll to Top