ನಾಡ ವೈಭವ
ರಚನೆ : ಶಿವಪ್ರಸಾದ ಹಿರೇಮಠ
----------------------------------
ಕಣ್ಣರಳಿಸಿ ನೋಡು ನಮ್ಮ ಕರ್ನಾಟಕದ ವೈಭವ, ಮನೆ ಮನದಲಿ ಚಿಗುರಲಿ ಇದರ ನಿತ್ಯ ಉತ್ಸವ. ಕರುನಾಡಲ್ಲಿ ಕಲೆ - ಸಾಹಿತ್ಯ, ಸಂಸ್ಕೃತಿಗಿದೆ ದೊಡ್ಡ ಮಾನ್ಯತೆ, ಅದನು ಅರಿತು, ತಿಳಿದು, ಬೆಳೆಸುತಿರುವ ಜೀವಕ್ಕಿದೆ ಧನ್ಯತೆ. ದಾಸರ ಪದ, ಶರಣರ ವಚನಗಳೆಮಗೆ ಅನುಶಾಸನ, ಜನಪದರ ಹಾಡು - ಕಥೆಗಳಲ್ಲಿಯೂ ಇಹುದು ಮಾರ್ಗದರ್ಶನ. ಕಾಡು-ಬೀಡು, ಶಿಲ್ಪ-ಕಲ್ಪ ಎಲ್ಲವಿಹುದು ಇಲ್ಲಿ, ಒಂದು ರಾಜ್ಯ, ಹಲವು ಜಗತ್ತು ಎಂಬ ವಾಕ್ಯ ಬಲ್ಲಿ. ನನ್ನ ನಾಡು, ನನ್ನ ಭಾಷೆ ಇವುಗಳೆನ್ನ ಹೆಮ್ಮೆ, ಇದನರಿಯದ ಕನ್ನಡಿಗನು ಒಂದು ಮಂಕುದಿಮ್ಮೆ.
----------------------------------
ನೋಂದಣಿ ಐಡಿ : KPF-S1-5044