Submission 1064

ಮರಗಳೆ ನಮ್ಮ ಮಕ್ಕಳು

ರಚನೆ : ಕಲ್ಲಪ್ಪ ಪರಸಪ್ಪ ಡೋಣಿ

----------------------------------

ಜಗವಿದು ವಿಶಾಲದಾಲದ ಮರ ವಿಶಾಲವಾಗಲಿ ಅಮರ ಆಮರ ಮನೆಗ್ಹತ್ತು ಮರವಿರಲಿ ಜಗ ನಕ್ಕು ನಲಿತಿರಲಿ ಮನುಜನ ನೆಲೆ ಅಶಾಶ್ವತ ತವರ ಮರಕ್ಕಿಲ್ಲ ಮರಣ ಅದೆಂದೂ ಅಮರ||೧|| ಮನುಜ ಮಾಡುತಿಹನು ಮರಗಳ ಹರಣ ಹೆಚ್ಚುತಿದೊ ಬಿಸಿಲಿನ ಧಗೆಯ ರಣರಣ ತಿಳಿದೂ ಮಾಡುತಿಹನು ಕಾಲಹರಣ ಜಾರುತಿದೊ ಭುವಿಯ ನಿಯಂತ್ರಣ||೨|| ಮರಕ್ಕಿಲ್ಲ್ಯಾವ ಬೇಧ—ಭಾವ ಮಕ್ಕಳಂತೆ ಬೆಳೆಸೋಣನಾವು ಮರಗಳೆ ನಮ್ಮ ಮಕ್ಕಳು ನಮ್ಮೀ ದೇಹದ ಹೊಕ್ಕಳು||೩||

----------------------------------

ನೋಂದಣಿ ಐಡಿ : KPF-S1-5542

0
Votes
170
Views
11 Months
Since posted

Finished since 311 days, 18 hours and 29 minutes.

Scroll to Top