Submission 1028

ವೈರಾಗ್ಯ

ರಚನೆ : ಧಾರಿಣಿ ಮಾಯಾ

----------------------------------

ಕಳಚುತಿದೆ ಮೋಹ ಆವಾಹನೆಯಾಗುತ್ತಿದೆ ಪರಿತ್ಯಾಗ ಜಟಿಲವಾಗುತ್ತಿದೆ ಭಾವಬಂಧನ ಸೆರೆಯಾಳಾಗಿದೆ ಮೈಮನ ಕನಸು ನನಸಿನ ಮುಖಾಮುಖಿ ಯಾವುದ ಆರಿಸಲಿ ಹೇಳೇ ಸಖಿ ಒಡಲ ನೆತ್ತರು ಬಸಿದಿಹುದು ತನುಮನವೆಲ್ಲಾ ಬರಿದಾಗಿಹುದು ಗತಬದುಕಿನ ಛಾಯೆ ಮನಃ ಪಟದಲಿ ಪುಟಿಯುತ್ತಿದೆ ಭವಬಂಧನ ಜಾಲದಿ ಸುಲಭದಿ ಹೇಗೆ ಕಳಚಲಿ!

----------------------------------

ನೋಂದಣಿ ಐಡಿ : KPF-S1-5510

0
Votes
168
Views
1 Year
Since posted

Finished since 311 days, 19 hours and 26 minutes.

Scroll to Top