Submission 914

ಸ್ನೇಹ ಅಥವಾ ಪ್ರೀತಿ ?

ರಚನೆ : ಶಿವಕುಮಾರ್ ಕಂಚಿ

----------------------------------

ಪ್ರೀತಿಯಿಂದ ಬಂದು ಪ್ರೀತಿಯೇ ಕೇಳುವರು, ನನ್ನವರ? ನಿನ್ನವರ? ಯಾರವರೋ ಎಂದು! ಹೃದಯ ಹಂಚಿ, ಕನಸು ಬೆಸೆಯುವರು, ಆದರೆ ಪ್ರತಿಫಲಕ್ಕೆ ನಿರೀಕ್ಷೆ ಇಡುವರು. ಸ್ನೇಹವೆಂದರೆ ಇರುವುದು ಮಾತ್ರ, ನೀಡಲು ಹಾತೊರೆಯುವ ನಿಸ್ವಾರ್ಥ ಬೆಳಕು. ಹಂಚಿದ ನಗುವಿಗೆ ಬೆಲೆ ಬೇಡೆಂದು, ಸಾಥ್ ಕೊಡುವುದೇ ಸತ್ಯದ ಗಿಡವು. ಪ್ರೀತಿ ಮುರಿದರೆ ನೋವು ಆಗಬಹುದು, ಸ್ನೇಹ ಮುರಿದರೆ ಜೀವವೇ ಹೋಗುವುದು. ಸ್ವಾರ್ಥದ ನೆರಳು ಇಲ್ಲದ ಬೆಳಕಾಗು, ನಿಜ ಸ್ನೇಹವೆ ಬಾಳಿಗೆ ಬೆಳಕು ಬೆಳಕು!

----------------------------------

ನೋಂದಣಿ ಐಡಿ : KPF-S1-5425

0
Votes
182
Views
1 Year
Since posted

Finished since 350 days, 7 hours and 8 minutes.

Scroll to Top