Submission 908

ಒಂದು ಮದುವೆಯ ಊಟ

ರಚನೆ : ಮಹೇಂದ್ರ ಕೆ ಆರ್

----------------------------------

ಮುಂದಿನ ಸಾಲು ತುಂಬಿತ್ತು ಹೆಂಗೆಳೆಯರಿಂದ| ಮಂದಾನಿಲ ಬೀಸಿತ್ತು ಹಾರುತಿದ್ದ ಕೇಶಗಳಿಂದ|| ಒಂದು ಕಣ್ಣೆಮ್ಮದು ಎಲೆಯತ್ತ, ಇನ್ನೊಂದು ಅತ್ತ| ನಿಂದಲ್ಲವೆ ಸೃಷ್ಚಿಯಿದು.. ತಪ್ಪ್ಯಾ ರದೊ ಬೊಮ್ಮ?|| ಅವರಲ್ಲೊಬ್ಬಳು!, ಒಂದಗಳೂ ಉಳಿಸದೆ ತಿಂದವಳು!!| ಅವಳತ್ತ ಹರಿದಿತ್ತು ಗಮನ, ಮರುಳಾಗಿ ಮನ|| ಅವಸರದಿಂದ ತಿಂದೆದ್ದು ಹುಡುಕಾಡಿ ಸೋತೆ| ಅವಿತಳೆಲ್ಲಿ ಅವಳು, ನೀಕಂಡೆಯಾ ಬೊಮ್ಮ?|| ಕಣ್ಣನು ಮುಚ್ಚಿ ಯೋಚಿಸಿದೆ, ಇದೆಂತಹ ಭಾವನೆ?| ಬಣ್ಣದ ಗೆಜ್ಜೆ ಸಣ್ಣಗೆ ಸದ್ದಾದಂತೆ?|| ಸುಣ್ಣದ ಬಿಳುಪು ಬಾಳಲ್ಲಿ ಬಣ್ಣದ ರಂಗೋಲಿಯಂತೆ?| ಮಣ್ಣಾಕ......... ಹೋಲಿಕೆ ಸಿಗುತಿಲ್ಲ ಬೊಮ್ಮ!!!|| ಮತ್ತೆದ್ದು ಹುಡುಕಿದೆ, ಒಳಗೆ-ಹೊರಗೆ, ಮೇಲೆ-ಕೆಳಗೆ| ಅತ್ತಕಡೆ ಮೂಲೆಯಲ್ಲಿ, ಕಂಡಳವಳು ಗುಂಪಿನಲ್ಲಿ|| ಹತ್ತಿರಾಗಿ ನೋಡ,ಅವಳಕೈಯಿತ್ತು ಮತ್ತೊಬ್ಬನ ಕೈಯಲ್ಲಿ, ಮತ್ತೇನಿದೆ?....., 'ನನಗಿದು ಬೇಕಿತ್ತಾ' ಬೊಮ್ಮ?||

----------------------------------

ನೋಂದಣಿ ಐಡಿ : KPF-S1-5422

0
Votes
167
Views
1 Year
Since posted

Finished since 348 days, 0 hours and 48 minutes.

Scroll to Top