Submission 864

ನನ್ನ ನಲ್ಲ

ರಚನೆ : ಕೋಮಲ ಪವನ್ ಎಸ್. ಆರ್

----------------------------------

ನಿನ್ನ ಹೃದಯದ ಅರಮನೆಯಲ್ಲಿ ನಿನ್ನ ಕನಸಿನ ಕೋಣೆಯಲ್ಲಿ, ನಾ ಇರಬೇಕು ಸದಾ ನಿನ್ನ ಬಳಿಯಲ್ಲಿ, ಬಂಧಿ ಆಗಬೇಕು ಸದಾ ನಿನ್ನ ತೋಳಿನಲ್ಲಿ, ನೀ ಒಲ್ಲೆ ಎಂದರೆ ಹೇಗಾಗಲಿ ನಿನ್ನ ನಲ್ಲೆ.... ನಿನ್ನೊಲವು ಬಾಡದ ಹೂವಾಗಿರಲು ಅದರ ಕಂಪು ನನ್ನ ಶ್ವಾಸ ನಿಂತ ಮೇಲೂ, ನೀ ನನ್ನ ನೆನಪಾಗಿರಬೇಕು ನಾ ಹೋದ ಮೇಲೂ, ನೀ ಇರಬೇಕು ನನ್ನ ಭಾವವಾಗಿ ಎಂದೂ ಬಿಡಿಸದ ಬಂಧವಾಗಿ. ನೀ ಇರು ಈ ತನುವಿನ ಚೇತನವಾಗಿ, ಇನ್ನೇನಿದೆ ನಿನ್ನ ಅನುರಾಗ ಕ್ಕಿಂತ ಮಿಗಿಲಾಗಿ...

----------------------------------

ನೋಂದಣಿ ಐಡಿ : KPF-S1-5396

0
Votes
144
Views
1 Year
Since posted

Finished since 352 days, 13 hours and 16 minutes.

Scroll to Top