Submission 856

ದುಡಿವ ತಂದೆಯೇ ಸೂರ್ಯ

ರಚನೆ : ಭಾಗ್ಯ

----------------------------------

ಪಡುವಣವೇ ಯಾಕಿನ್ನು ತಡೆದಿರುವೆ ಕರ್ತವ್ಯ ಮುಗಿಸಿದ ಸೂರ್ಯನನ್ನು ? ಉರಿದು ದಣಿದ ಅರ್ಕನಿಗಾಗಿಯೇ ಕಾಯುತಿಹಳು ಮಡದಿ ಛಾಯಾ... ಹೊಲದಲ್ಲಿ ಮೇಯ್ದ ದನ ಕರುಗಳು ಕಾಯುತಿಹವು ಮರಳಲು ಬೀಡಿಗೆ ಕಳಿಸಿ ಬೀಡು ಭಾನುವನು ಮನೆಗೆ ಚಂದಿರ ಬಂದು ಭುವಿ ತಂಪಾಗಲಿ.. ಇನ್ನೆಷ್ಟು ಸುದೀರ್ಘ ಉರಿಯಬೇಕು ಪೃಥ್ವಿಯ ಬೆಳಗಲು, ಅನ್ನ ನೀಡಲು ವಿರಾಮ ಬೇಡವೇ ಭಾಸ್ಕರನಿಗೂ ಕಳಿಸು ಬೇಗ ವಿರಮಿಸಿ ಶಾಂತನಾಗಲಿ.. ದುಡಿವ ‌ನನ್ನ ತಂದೆಯೇ ದಿನಕರ, ನೇಸರ ಪಡುವಣದ ಮನೆ ಸೇರಲಿ, ನನ್ನ ತಂದೆ ಮನೆಗೆ ಮರಳಲಿ..

----------------------------------

ನೋಂದಣಿ ಐಡಿ : KPF-S1-5392

0
Votes
118
Views
11 Months
Since posted

Finished since 306 days, 12 hours and 25 minutes.

Scroll to Top