Submission 782

ಭೂಮಾತಾಯಿ

ರಚನೆ : ಆನಂದ ಕುಂಚನೂರ

----------------------------------

ಕದಡದ ಕಡಲು ಕದಲದ ಕನಲು; ಕಾತರದ ಕೂಸಿಗೆ ಕಾಲಡಿ ಕಮಲಾಕಾಶ ನೆತ್ತಿಯ ತಲ ಸ್ಪರ್ಶಿಸಿ ಮಳೆಯೆಂಬ ಪದಕೋಶ ಹನಿಹನಿಯ ಶಬ್ದಸಹಿತ ಜಗದೆಲ್ಲ ಭಾವ ಮೀಯಬಲ್ಲ ಯುಗದೆಲ್ಲ ತಿಳಿಯ ತಲುಪಬಲ್ಲ ಕಾಡು ಕಣಿವೆ ನಾಡು ನಕಾಶೆ ಅನೂಚಾನ ಎದೆಯಮೇಲೆ ಚಿಕ್ಕೆಯಂತೆ ಬಿಡಿಬಿಡಿ ಹರಡಿ ಸಾಕಾರ ಶಂಖ-ರ ಶಿಶು ಅಸಂಖ್ಯ ಪ್ರತಿಮಾ ಸರಪಳಿ ಬೇಡಿದ್ದೆ, ನಾನು ಆತ್ಮನಾಗೇ ಸುಳಿವೆ ತಿಳಿಗೇಡಿ ಕೀಟದಂತೆ ಆಹಾರವಾಗಲಾರೆ. ನೀನು ಕರೆದೆ ತೊಡಿಸಿದೆ ನಿನ್ನ ಹೆಸರ, ಅವಳೆಂದೂ ಶೋಭಿಸಲಿಲ್ಲ ಅವಳನೆಂದೂ ಶ್ಲಾಘಿಸಲಿಲ್ಲ ರಾತ್ರಿಯ ಮೊರೆತಗಳಲಿ ಹಂಗಾಮಿ ಹಗಲುಗಳ ಕೊರತೆ ನೀಗಿಸಿದಳು ಕ್ಷಮತೆ ಬೆಳಗಿ ತನ್ನ ಹೆಸರೇ ಮರೆತಳು ಸಾಗರವೆಂದಿರೊ ಸಾಯುವೆ ಸಮುದ್ರವೆಂದಿರೊ ಸವೆಯುವೆ ನೀರೆಂದರೂ ಬರಿಯ ಉಪ್ಪು ಸಾದೃಶ್ಯ ಜಲಚಿತ್ರಗಳು ಅವಳ ಬಿಳಿಯ ನೆರಳಿಗೆ ಬಿಸಿಲು ಸೋಕಿ ಪ್ರತಿಫಲಿ,ಸಲು-ವಾಗಿ ಹುಟ್ಟಿದವು ನೂರು ಪ್ರಸ್ತಾವಣೆ ಮರಣದ ಮೌನಬಿಂದು. ಭೂಮಾತಾಯಿ ಭೂಮಾತಾಯಿ ಭೂಮಾತಾಯಿ ಭೋರ್ಗರೆಯೆ ಸಿಡಿಲ ಮಳೆಸುರಿಯೆ ಎಲ್ಲ ಪಾದ ಪಾಪ ತೊಳೆಯೆ ಸಂಭವಿಸು ಮತ್ತೆ ತಾಯಿಯೇ ಆಗಿ

----------------------------------

ನೋಂದಣಿ ಐಡಿ : KPF-S1-5354

0
Votes
151
Views
1 Year
Since posted

Finished since 355 days, 12 hours and 53 minutes.

Scroll to Top