Submission 689

ವೃದ್ಧಾಪ್ಯ

ರಚನೆ : ಶಿಲ್ಪಾ ಎಸ್

----------------------------------

ಸುಕ್ಕುಗಟ್ಟಿದೆ ಮೈ ಚರ್ಮವೆಲ್ಲ ಕೂರಲಾಗುತ್ತಿಲ್ಲ ಮಂಡಿ ನೋವು ದಿನವೆಲ್ಲ ಯವ್ವನದಲ್ಲಿದ್ದ ಅಂದ ಚಂದ ಮಾಸಿ ಹೋಗಿದೆ ತಲೆಗೂದಲು ಬೆಳ್ಳಗಾಗಿ ಚರ್ಮವೆಲ್ಲ ಜೋತುಬಿದ್ದಿದೆ ಎಷ್ಟೇ ಸಂಪತ್ತಿದ್ದರೇನು ಮುಪ್ಪನ್ನು ತಡೆಯಲಾಗದು ಮಾಡಿದ ಕರ್ಮವು ತಟ್ಟದೇ ಹೋಗದು ಹೆತ್ತ ಮಕ್ಕಳು ಆಸರೆಯಾಗುರೆಂದು ಭಾವಿಸಿ ಬೆಟ್ಟದಷ್ಟು ಪ್ರೀತಿಯ ಎರಚಿದವರೆಲ್ಲ ಕಣ್ಣೀರು ಇಡುತ್ತಿರುವರು ವೃದ್ಧಾಶ್ರಮದ ತುಂಬೆಲ್ಲ ಸಾವಿನ ದಾರಿಯ ಕಾಯುವ ಮುದಿ ಮನಸುಗಳ ನೋವು ಅರಿಯದೆ ದೂಡುವೆವು ಪಂಜರದೊಳಗೆ ನಾವು

----------------------------------

ನೋಂದಣಿ ಐಡಿ : KPF-S1-5297

0
Votes
202
Views
1 Year
Since posted

Finished since 398 days, 5 hours and 43 minutes.

Scroll to Top