Submission 583

ಶಿವಲೀಲಾಮೃತ

ರಚನೆ : ಗೀತಾ ಹುದ್ದಾರ

----------------------------------

ಶಿವ ನಾಮ ಸ್ತುತಿಸು ಭವಭಯ ಅಳಿಸು ಶಿವ ಭಸ್ಮ ಧರಿಸು ಮನ ಸಂತೈಸು ಶಿವ ಶಿವ ಶಿವ ಶಿವನೇ ಶಿವಮಯವೇ ಭಕ್ತಿಭಾವ ಗಂಗೆ ಸ್ಥಾನ ತಲೆಯಲಿ ನಾಗಭೂಷಣ ಜಡೆಯಲಿ ತ್ರಿಲೋಕ ಸಂಚಾರಿ ದೊರೆ ಭಸ್ಮಾಂಕಿತ ಶಿವಕೃಪೆ ಶಿವಮಯವೇ ಆಚಾರ್ಯಭಾವ ಹುಲಿ ಚರ್ಮಭರಿತ ಸ್ಮಶಾನ ಕುಲತಿಲಕ ನಂದೀಶ್ವರ ನಾಮಾಂಕಿತ ತ್ರಿಶೂಲ ಡಮರುಗ ನಾದ ಭಡಿತ ನಾಟ್ಯರಾಜನ ಮಹಿಮಾಮೃತ ಶಿವಮಯವೇ ಆನಂದಭಾವ ನೀಲಕಂಠ ಜಗದೀಶ್ವರ ಸತಿಯ ಮನಗೆದ್ದ ಅರ್ಧನಾರೀಶ್ವರ ತ್ರಿದಳ ಪೂಜ್ಯ ಪರಮೇಶ್ವರ ಕೈಲಾಸ ಒಡೆಯ ಮಹೇಶ್ವರ ಓಂ ನಮಃ ಪಠಣ ಭಸ್ಮೇಶ್ವರ ಶಿವಮಯವೇ ಆಧ್ಯಾತ್ಮಭಾವ

----------------------------------

ನೋಂದಣಿ ಐಡಿ : KPF-S1-5172

0
Votes
145
Views
1 Year
Since posted

Finished since 352 days, 17 hours and 17 minutes.

Scroll to Top