Submission 559

ಹೆಣ್ಣಿರದ ಬದುಕು

ರಚನೆ : ಚಲುವೇಗೌಡ ಡಿ ಎಸ್ ದೊಡ್ಡಹಳ್ಳಿ

----------------------------------

ಹೆಣ್ಣಿರದ ಮಾನವನ ಬದುಕು ನೀರಿರದ ತೊರೆಯಂತೆ ಫಲಪುಷ್ಪಗಳಿರದ ವೃಕ್ಷಗಳಂತೆ ಮೀನು ತಾವರೆಗಳಿರದ ಕೆರೆಯಂತೆ ತಾರೆಗಳಿರದ ಬರಿದು ಆಗಸದಂತೆ..!! ಸ್ತ್ರೀಯಿರದ ಮನುಜ ಲೋಕವು ಮಳೆಯಿರದ ಬರಡು ಇಳೆಯಂತೆ ಶಶಿಯು ಮೂಡದ ಬಾನಂತೆ ಶಾಯಿ ಮುಗಿದ ಪೆನ್ನಿನಂತೆ ರವಿಯಿರದ ಅಂಧಕಾರದ ಇರುಳಂತೆ..!! ವನಿತೆಯರಿರದ ಮನುಷ್ಯ ಜೀವನವು ಮಂದಿಗಳಿರದ ಸಂತೆ ಜಾತ್ರೆಗಳಂತೆ ಮಕ್ಕಳಿರದ ಶಾಲೆಯಂತೆ ನೆರಳಿರದ ಜಾಲಿಯ ಮರದಂತೆ ದಾರಿಗಳಿರದ ಊರುಗಳಂತೆ ನಾವಿಕನಿರದ ದೋಣಿಯಂತೆ..!! ಹೆಂಗಸಿರದ ಮನುಜನ ಬದುಕು ಬರಿದು!ಬರಿದು!ಬರಿದು!..

----------------------------------

ನೋಂದಣಿ ಐಡಿ : KPF-S1-5152

0
Votes
151
Views
1 Year
Since posted

Finished since 354 days, 12 hours and 22 minutes.

Scroll to Top