Submission 543

ಹೇಗೆ ಪಡೆಯಲಿ ಕಾಣರಿಯಾದ ಒಲವೊಂದು?

ರಚನೆ : ಜಗನ್ನಾಥ್ ಕ್ಷೀರಸಾಗರ

----------------------------------

ಅರಿಯದೇ ಮೂಡಿತು ಒಲವೊಂದು ತುಸು ದೂರ ಸಾಗಿತ್ತು. ಮೋಡ ಸರಿದು ಮಳೆಯು ತಾಕಲು ತುಸು ನಾಚಿ ನಕ್ಕಿತ್ತು ಒಲವೊಂದು. ಮನದ ಮಾತು ಹೇಳುವ ಮುನ್ನ ಮರೆತು ಹೋಗಿದ್ದೆ ನನ್ನೇ ನಾನು. ಹೇಗೆ ಹುಡುಕಲಿ ಈಗ ಕಳೆದು ಹೋದ ಒಲವೊಂದು?. ಕೊನೆಯದಾಗಿ ಕೇಳುವಾಸೆ ಹೇಗೆ ಪಡೆಯಲಿ ಕಾಣರಿಯದಒಲವೊಂದು?. ಹಿಂತಿರುಗಿ ನೋಡಲೇ ! ಇಲ್ಲ ಮತ್ತೊಮ್ಮೆ ಮರೆಯಲೇ ?. ಮುಗಿದ ಪಯಣಕೆ ದಾರಿ ತೋಚದೆ ಹಗಲಿರುಳು ಸಾವಿರಾರು ಯೋಚನೆ . ಸುಂಕವಿಲ್ಲದ ಕನಸ್ಸಿಗೊಂದು ಕೊನೆಯದಾಗಿ ಕೇಳುವಾಸೆ ಹೇಗೆ ಪಡೆಯಲಿ ಕಾಣರಿಯದ ಒಲವೊಂದು?

----------------------------------

ನೋಂದಣಿ ಐಡಿ : KPF-S1-5128

0
Votes
151
Views
1 Year
Since posted

Finished since 347 days, 12 hours and 28 minutes.

Scroll to Top