Submission 423

ಆಕೆ ಶಾಕುಂತಲೇ...!

ರಚನೆ : ದುಂಡೇಶ್ ಮಹೇಶ್ ಮರಿಕಟ್ಟಿ

----------------------------------

ಹಂ...ಹೌದು ಅವಳೇ ಶಾಕುಂತಲೆ ಇರಬಹುದು ಬಹುಶಃ ಆಕೆನ ಮೊದಲನೇ ಸಲ ನೋಡಿದಾಗ ಈ ಬೊಬ್ಬಿರಿಯೋ ಬೇಸಿಗೆಯಲ್ಲಿ ತಂಪಾದ ತಂಗಾಳಿ ಬಂದಗಾಯ್ತು, ಆಕೆಯ ಕಾಜಲ್ ಇಲ್ಲದ ಕಾಲಿ ಕಣ್ಣುಗಳ ಕಣ್ಣ ಕಾಂತಿ ನನ್ನ ಮುಗ್ಧ ಮನದೊಳಗೆ ಹುಟ್ಟಾಕೆ ಬಿಟ್ಟಿತ್ತು ಸಂಪೂರ್ಣ ಅಶಾಂತಿ ನೀಳ ಜಡೆಯ ಕಟ್ಟಿ, ತುಸು ಮುಂಗುರುಳ ಕುಂಚ ಕಟ್ಟಿ ಕಡು ಕೆಂಪು ಬಿಂದಿಯ ಹಣೆಯಮೇಲಿಟ್ಟು ಕೆಂಗುಲಾಬಿ ಬಣ್ಣದ ಸೀರೆಯ ಮೈತುಂಬ ತೊಟ್ಟು ಕೇಳುವ ಕರ್ಣಗಳಿಗೆ ತೇಲಾಡುವ ನಿಶ್ಯಬ್ಧದ ಜುಮುಕೆ ಇಟ್ಟು ಮುದ್ದಾದ ಗಿಣಿ ಮೂಗಿಗೆ ಮೂಗುತಿ ನತ್ತು ಜನ ಜಂಗುಳಿಯ ಜಾತ್ರೆಯೊಳಗೆ, ನನ್ನತ್ತ ತಿರುಗಿ ನಕ್ಕಳಾಕೆ ಅವಳ ಡಿಂಪಲ್ ಇರದ ಸಿಂಪಲ್ ನಗುವಿನ ಮೋಹಕೆ ಹಾಳಾದ್ ಹೃದಯ ನಿಯಂತ್ರಣ ತಪ್ಪಿ ಹಾಕಿತು ಪ್ರೀತಿಯ ಕೇಕೆ...! ಹಾ...ಅವಳೇ ಬಹುಶಃ ಶಾಕುಂತಲೆ ಆಕೆ... ಭೂಲೋಕಕ್ಕೆ ಅವತ್ತು ನನಗಾಗಿ ಬಂದ ಮೇನಕೆ ಶಾಕುಂತಲೆ ಆಕೆ...! ಆಕೆಯೇ ಶಾಕುಂತಲೆ...!

----------------------------------

ನೋಂದಣಿ ಐಡಿ : KPF-S1-5003

0
Votes
136
Views
1 Year
Since posted

Finished since 354 days, 12 hours and 16 minutes.

Scroll to Top